Posts

Showing posts with the label ಕಡಲ ವ್ಯಾಪಾರ

10. ಕನ್ನಡ ನಾಡಿನ ಪೂರ್ವೇತಿಹಾಸ -ಕಡಲ ವ್ಯಾಪಾರಗಳೂ ವಿದೇಶಿ ಸಂಪರ್ಕಗಳೂ

Image
ಕನ್ನಡನಾಡಿನ ಪೂರ್ವೇತಿಹಾಸದ ಅಂಧಕಾರದಲ್ಲಿ ಅಡಗಿರುವ ಪ್ರಾಚೀನ ವಿದೇಶಿ ಸಂಪರ್ಕಗಳ ನಿಗೂಢ ಹೊಳಹುಗಳು ಕುತೂಹಲಕಾರಿಯಾಗಿವೆ ಆಫ್ರಿಕಾ ಖಂಡದ ಹಾಗೂ ಮೆಡಿಟರೇನಿಯನ್ ವಲಯದ ಹಲವು ದೇಶಗಳಲ್ಲಿ ಆಗಿರುವಷ್ಟು ವ್ಯಾಪಕ ಪೂರ್ವೇತಿಹಾಸ ಸಂಶೋಧನೆ ನಮ್ಮಲ್ಲಿ ಇನ್ನೂ ಆಗದೆ ಇರುವುದು ನಮ್ಮ ಮುಂದಿರುವ ದೊಡ್ಡ ಸವಾಲು ಆಗಿದೆ. ನನ್ನ ಗಮನಕ್ಕೆ ಬಂದ ಪೂರ್ವೇತಿಹಾಸದ ಹಲವು ಪೂರಕ ಮಾಹಿತಿಗಳು ಇಲ್ಲಿವೆ: ಚಿತ್ರ ೧:ಕಡಲ ವ್ಯಾಪಾರ.... ** ಕರಾವಳಿ ಪ್ರದೇಶ ಪೂರ್ವೇತಿಹಾಸ ಕಾಲದಿಂದಲೂ ಕನ್ನಡ ನಾಡಿನ ಎಲ್ಲಾ ಅರಸರಿಗೆ ಕಡಲ ಕಡೆಯ ಹೆಬ್ಬಾಗಿಲು ಆಗಿತ್ತು. ಕನ್ನಡದ ರಾಜ್ಯಗಳ ಸ್ಥಾಪನೆಯ ಇತಿಹಾಸದಲ್ಲಿ ಕರಾವಳಿಯ ಸಾಹಸೀ ಯುವಕರ ಪಾತ್ರ ದೊಡ್ಡದಿದೆ. ಇತಿಹಾಸದ ಕದಂಬರು, ಆಳುಪರು, ಗಂಗರು ಮತ್ತು ಪುನ್ನಾಟರು ಕರಾವಳಿಯ ಜಿಗಿಹಲಗೆ (spring board) ಯಿಂದ ಸಹ್ಯಾದ್ರಿಯ ಆಚೆಗೆ ನೆಗೆದು ಪ್ರಾಚೀನ ಕನ್ನಡ ರಾಜ್ಯಗಳ ಸ್ಥಾಪನೆಯಲ್ಲಿ ಕೈಜೋಡಿಸಿದವರೇ ಆಗಿದ್ದಾರೆ. ಇತಿಹಾಸದ ಉದ್ದಕ್ಕೂ ಕರಾವಳಿಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ಉಳಿದಿರಲು, ತುಳು ಮುಂತಾದ ಉಳಿದ ಸ್ಥಳೀಯ ಭಾಷೆಗಳು ಬರವಣಿಗೆ ವಂಚಿತ, ಸಂಪರ್ಕದ ಮಾತುಗಳಾಗಿಯೇ ಇತಿಹಾಸದ ನೇಪಥ್ಯದ ಹಿಂದೆ ಉಳಿದಿರಲು ಕಡಲ ಮೂಲದ ವ್ಯಾಪಾರ ಸಂಪರ್ಕ-ಸಂಘರ್ಷಗಳು ಪ್ರಮುಖ ಕಾರಣವಾಗಿದೆ. ** ಮಾನವನ ಉಗಮ ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾಖಂಡದಲ್ಲಿ ಆಯಿತೆಂದು ಜೀವವಿಜ್ಞಾನಿಗಳು ತಿಳಿಸಿದ್ದಾರೆ. ಇತಿಯೋಪಿಯಾದ ...