Posts

Showing posts with the label ಜೀಬ್ರಾದಾಟುಗಳು

4.ನಿರ್ಮಲ ರಸ್ತೆಗಳು: ಟೋಕಿಯೊ ಮಾದರಿ

Image
  ರಸ್ತೆಗಳು ಆಧುನಿಕ ಜನಜೀವನದ ಜೀವನಾಡಿಗಳು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಯಣ ಸಹಜ ಅಗತ್ಯ ಎಂದ ಮೇಲೆ ಬಗೆಬಗೆಯ ವಾಹನಗಳ ಸುಗಮ ಸಂಚಾರಕ್ಕೆ ಸಾಕಷ್ಟು ವಿಶಾಲ ರಸ್ತೆಗಳು ಬೇಕೇ ಬೇಕು. ನಗರಗಳಲ್ಲಿ ವಾಹನಗಳಿಂದ ಹೆಚ್ಚು ಜನರು ಜೀವಿಸುತ್ತಾರೆ.ವಾಹನ ಇಲ್ಲದಿರುವವರೂ, ವಾಹನ ತ್ಯಜಿಸಿ ಕಾಲ್ನಡಗೆಯಲ್ಲಿ ಬರುವವರಿದ್ದಾರೆ. ನಗರ ಪ್ರವಾಸಕ್ಕೆಂದು ಬಂದವರಿದ್ದಾರೆ. ಜಾಗಿಂಗ್ ಹೆಸರಿನಲ್ಲಿ ಅಲ್ಲಿಂದಿಲ್ಲಿಗೆ ನಡೆದಾಡುವರಿದ್ದಾರೆ. ಸೈಕಲ್ ತುಳಿದು ಬೆವರಿಳಿಸಿ ಆನಂದಿಸುವವರಿದ್ದಾರೆ. ಇವರೆಲ್ಲ ಪಾದಚಾರಿಗಳಾಗಿ ನಗರದ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಹೋಗಿ ಬರಬೇಕಾಗುತ್ತದೆ. ಅವರ ಸಹಜ ಆವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಲ ಸುಂದರ ವಿಶಾಲವಾದ ಪಾದಮಾರ್ಗಗಳಿದ್ದರೆ, ಮಾರ್ಗಗಳ ಬದಿಯಲ್ಲಿ ತಂಪಾದ ಮರಗಳು, ಸುಂದರ ಬಣ್ಣದ ಹೂವುಗಳಿದ್ದರೆ, ನಡಿಗೆ-ಓಡಾಟ ಸಮಾಧಾನ ಸಂತೋಷಗಳಿಂದ ಸಾಗುತ್ತದೆ. ಮರಗಳು ಸಸ್ಯಗಳು ವಾಹನಗಳು ವಿಸರ್ಜಿಸಿದ ಇಂಗಾಲದ ವಿಷಗಳನ್ನು ಹೀರಿ ಪ್ರಜೆಗಳ ಆರೋಗ್ಯ ಕಾಪಾಡಬೇಕಾಗಿದೆ. ಇದಕ್ಕಾಗಿ ಸಸ್ಯ-ಮರಗಳನ್ನು ಪೋಷಿಸಿ ಕಾಪಾಡಬೇಕಿದೆ. ದೊಡ್ಡ ಮರಗಳು ಮಳೆಗಾಳಿ ಹೊಡೆತಕ್ಕೆ ಬಿದ್ದು ಹೋಗದಂತೆ ಸರಿಯಾದ ತಡೆಬೇಲಿಗಳು ಬೇಕು, ಇಲ್ಲವಾದರೆ ರಸ್ತೆಯಲ್ಲಿ ಇಟ್ಟ ವಾಹನಗಳು ಬಿದ್ದ ಮರದಡಿಯಲ್ಲಿ ಜಖಂ ಅಗುತ್ತವೆ. ಪ್ರವಾಸಿಗಳ ಪಾದಚಾರಿಗಳ ಉಪಯೋಗಕ್ಕೆ ಅಲ್ಲಲ್ಲಿ ನಿರ್ಮಲ ಶೌಚಾಲಯಗಳು ಬೇಕಿದೆ. ಪಾದಚಾರಿಗಳು ರಸ್ತೆ ದಾಟಿ ಆಚೆ ಬದ...

1.ಹಂಪನಕಟ್ಟೆ ದಾರಿದಾಟುವ ಪಾದಾಚಾರಿಗಳ ಪರದಾಟ

Image
ಸ್ಮಾ ರ್ಟ್ ಸಿಟಿ ಆಗುವ  ಹಂಬಲದಲ್ಲಿರುವ  ನಮ್ಮ ಮಂಗಳೂರು  ನಗರದಲ್ಲಿ ಹಲವಾರು  ಮೂಲಭೂತ  ಸೌಕರ್ಯಗಳ ಪರಿಸ್ಥಿತಿ ಸುಧಾರಿಸ  ಬೇಕಾದಂತಹ  ಅಗತ್ಯವಿದೆ. ಮಂಗಳೂರು ನಗರದ  ಸಹಜ ಸಮಸ್ಯೆಗಳಲ್ಲಿ ಒಂದು ಹಂಪನಕಟ್ಟೆಯಂತಹ   ವಾಹನ ನಿಬಿಡ  ಪ್ರದೇಶಗಳಲ್ಲಿ  ರಸ್ತೆ ದಾಟುವಾಗ ಸಾಮಾನ್ಯ  ಪಾದಚಾರಿಗಳು ದಿನ ನಿತ್ಯ ಅನುಭವಿಸುವ  ಪರದಾಟ ಮತ್ತು ಸಂಕಟ. ಹಾಗೆ ನೋಡಿದರೆ ನಮ್ಮ ಸರಕಾರಿ  (ಅ)ವ್ಯವಸ್ಥೆಯಲ್ಲಿ ರಸ್ತೆಗಳನ್ನು ವಾಹನಗಳಿಗಾಗಿ ಮಾತ್ರಾ ರಚನೆಮಾಡಿದಂತಿದೆ. ಶ್ರೀಸಾಮಾನ್ಯರು ಬಳಸುವ ಪಾದಮಾರ್ಗ (ಪುಟ್ ಪಾತ್) ಗಳ  ಸೂಕ್ತ ನಿರ್ವಹಣೆಯ ಬಗೆಗೆ ನಮ್ಮನ್ನು ಆಳುವವರಿಗೆ, ನಗರಸಭೆಗಳಿಗೆ ಅತೀವ  ತಾತ್ಸಾರವಿದ್ದಂತಿದೆ.  ಉದಾಹರಣೆಗೆ, ಸೆಂಟ್ರಲ್ ಟಾಕೀಸಿನಿಂದ ಪಿರೇರಾ ಹೊಟೇಲಿಗೆ ನಡೆದು ಬರುವ ದುರ್ಗಮ ಪಾದ(ಚಾರಿ)ಮಾರ್ಗದ  ಅ(ವ್ಯ)ವಸ್ಥೆ  ಜಗತ್ತಿನ ಅತ್ಯಂತ  ಕೆಟ್ಟ ವಿನ್ಯಾಸದ  ಪಾದಮಾರ್ಗ  ಎಂಬ ಹೆಗ್ಗಳಿಕೆಗೆ  ಗಿನ್ನೆಸ್  ದಾಖಲೆಗಾಗಿ  ಕಾಯುತಿರುವಂತಿದೆ. ಟೋಕಿಯೋ ನಗರದ ಜೀಬ್ರಾದಾಟುಗಳ ಸೌಂದರ್ಯ ೧ ಟೋಕಿಯೋ ನಗರದ ಪಾದಮಾರ್ಗಗಳ ಮತ್ತು ಜೀಬ್ರಾದಾಟುಗಳ ಸೌಂದರ್ಯ ೨ ಜಗತ್ತಿನ  ಸುಂದರ  ನಗರಗಳಲ್ಲಿ ಒಂದಾದ  ಟೋಕಿಯೋ  “ಪಾದಚಾರಿಗಳ ನಗರ” ಅಥವಾ “ ...