ರಸ್ತೆಗಳು ಆಧುನಿಕ ಜನಜೀವನದ ಜೀವನಾಡಿಗಳು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಯಣ ಸಹಜ ಅಗತ್ಯ ಎಂದ ಮೇಲೆ ಬಗೆಬಗೆಯ ವಾಹನಗಳ ಸುಗಮ ಸಂಚಾರಕ್ಕೆ ಸಾಕಷ್ಟು ವಿಶಾಲ ರಸ್ತೆಗಳು ಬೇಕೇ ಬೇಕು. ನಗರಗಳಲ್ಲಿ ವಾಹನಗಳಿಂದ ಹೆಚ್ಚು ಜನರು ಜೀವಿಸುತ್ತಾರೆ.ವಾಹನ ಇಲ್ಲದಿರುವವರೂ, ವಾಹನ ತ್ಯಜಿಸಿ ಕಾಲ್ನಡಗೆಯಲ್ಲಿ ಬರುವವರಿದ್ದಾರೆ. ನಗರ ಪ್ರವಾಸಕ್ಕೆಂದು ಬಂದವರಿದ್ದಾರೆ. ಜಾಗಿಂಗ್ ಹೆಸರಿನಲ್ಲಿ ಅಲ್ಲಿಂದಿಲ್ಲಿಗೆ ನಡೆದಾಡುವರಿದ್ದಾರೆ. ಸೈಕಲ್ ತುಳಿದು ಬೆವರಿಳಿಸಿ ಆನಂದಿಸುವವರಿದ್ದಾರೆ. ಇವರೆಲ್ಲ ಪಾದಚಾರಿಗಳಾಗಿ ನಗರದ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಹೋಗಿ ಬರಬೇಕಾಗುತ್ತದೆ. ಅವರ ಸಹಜ ಆವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಲ ಸುಂದರ ವಿಶಾಲವಾದ ಪಾದಮಾರ್ಗಗಳಿದ್ದರೆ, ಮಾರ್ಗಗಳ ಬದಿಯಲ್ಲಿ ತಂಪಾದ ಮರಗಳು, ಸುಂದರ ಬಣ್ಣದ ಹೂವುಗಳಿದ್ದರೆ, ನಡಿಗೆ-ಓಡಾಟ ಸಮಾಧಾನ ಸಂತೋಷಗಳಿಂದ ಸಾಗುತ್ತದೆ. ಮರಗಳು ಸಸ್ಯಗಳು ವಾಹನಗಳು ವಿಸರ್ಜಿಸಿದ ಇಂಗಾಲದ ವಿಷಗಳನ್ನು ಹೀರಿ ಪ್ರಜೆಗಳ ಆರೋಗ್ಯ ಕಾಪಾಡಬೇಕಾಗಿದೆ. ಇದಕ್ಕಾಗಿ ಸಸ್ಯ-ಮರಗಳನ್ನು ಪೋಷಿಸಿ ಕಾಪಾಡಬೇಕಿದೆ. ದೊಡ್ಡ ಮರಗಳು ಮಳೆಗಾಳಿ ಹೊಡೆತಕ್ಕೆ ಬಿದ್ದು ಹೋಗದಂತೆ ಸರಿಯಾದ ತಡೆಬೇಲಿಗಳು ಬೇಕು, ಇಲ್ಲವಾದರೆ ರಸ್ತೆಯಲ್ಲಿ ಇಟ್ಟ ವಾಹನಗಳು ಬಿದ್ದ ಮರದಡಿಯಲ್ಲಿ ಜಖಂ ಅಗುತ್ತವೆ. ಪ್ರವಾಸಿಗಳ ಪಾದಚಾರಿಗಳ ಉಪಯೋಗಕ್ಕೆ ಅಲ್ಲಲ್ಲಿ ನಿರ್ಮಲ ಶೌಚಾಲಯಗಳು ಬೇಕಿದೆ.
ಪಾದಚಾರಿಗಳು ರಸ್ತೆ ದಾಟಿ ಆಚೆ ಬದಿಗೆ ಹೋಗಬೇಕಿದೆ. ವೇಗವಾಗಿ ಕ್ರಮಿಸುವ ವಾಹನಗಳು ನಿಧಾನಿಸಿ ನಿಂತು ಪಾದಚಾರಿಗಳಿಗೆ ಕ್ಷೇಮವಾಗಿ ರಸ್ತೆ ದಾಟಲು ಸಹಕರಿಸಬೇಕಿದೆ. ಇದಕ್ಕಾಗಿ ಎಂದೇ ರಸ್ತೆ ದಾಟುವಲ್ಲಿ ಸ್ಪಷ್ಟವಾಗಿ ಎದ್ದು ಕಾಣುವ ಬಿಳಿಬಣ್ಣದ ಜೀಬ್ರಾ ಪಟ್ಟಿಗಳನ್ನು ಬಳಿಯಬೇಕಾಗಿದೆ.ವಾಹನಗಳು ಹೇಗೆ ಕ್ರಮಿಸಬೇಕು ಎಲ್ಲಿ ತಿರುವಬೇಕು ತಿಳಿಸಲು ರಸ್ತೆಯಲ್ಲಿ ಬಳಿದ ಬಣ್ಣದ ಗುರುತುಗಳು ಮಾರ್ಗದರ್ಶನ ಮಾಡಬೇಕಿದೆ.
ಇವೆಲ್ಲ ಕನಸಲ್ಲ, ಕಣ್ರಿ! ಪ್ರಪಂಚದ ಸುಂದರ ನಗರಗಳು ಸಹಜವಾಗಿ ಪಾಲಿಸುವ ರೂಡಿಗಳು!
ನಾಲ್ಕು ವರ್ಷಗಳ ಹಿಂದೆ (೨೦೧೭ ಮೇ) ಜಪಾನಿನ ಟೋಕಿಯೊ ನಗರದಲ್ಲಿ ಮೂರುವಾರ ಉಳಿದುಕೊಳ್ಳುವ ಅವಕಾಶ ದೊರೆತಿತ್ತು. ಆಗ ನನ್ನ ಚರವಾಣಿ ಹಿಡಿದು ಇಟ್ಟುಕೊಂಡ ಟೋಕಿಯೋ ನಗರದ ರಸ್ತೆಗಳ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ:
 |
ಸಂಚಾರಸ್ನೇಹಿ ರಸ್ತೆಗಳು, ಸುಂದರ ಪಾದಮಾರ್ಗಗಳು ನಡುವೆ ಹೂವಿನ ಗಿಡಗಳು ಇದ್ದರೆ ಕಣ್ಣಿಗೂ ತಂಪು, ಪ್ರದೂಷಣೆಯ ಇಂಗಾಲವನ್ನು ಗಿಡಗಳು ಹೀರುತ್ತವೆ |
 |
| ಹಾರುಸೇತುಗಳ- Flyovers - ಅಡಿ ಕೊಳಕಾಗಿರಬೇಕಿಲ್ಲ, ಸುಂದರವಾಗಿ ಇಟ್ಟುಕೊಳ್ಳಬಹುದು |
 |
| ವಿಶಾಲ ಸುಂದರ ಪಾದಮಾರ್ಗಗಳು ಸ್ಪುಟವಾದ ಜೀಬ್ರಾದಾಟುಗಳು-Zebra crossings- ಇದ್ದರೆ ನಗರ ಎಷ್ಟು ಚಂದ! |
 |
| ಅರೆ! ರಸ್ತೆ ಅಗಲವೋ, ಪಾದಮಾರ್ಗ- Footpath - ಅಗಲವೋ? |
 |
| ರಸ್ತೆ ಮತ್ತು ಸುಂದರ ಪಾದಮಾರ್ಗದ ನಡುವೆ ಗಿಡಮರಗಳ ತೆರೆ. |
 |
| ನಡಿಗೆಗೂ ಬಿರುನಡಿಗೆಗೂ, ಉರುಳಂಡಿ ಚಾಲನೆಗೂ - ಎಲ್ಲಕ್ಕೂ ಬೇಕು ಸುಂದರ ವಿಶಾಲ ಪಾದಮಾರ್ಗ |
 |
| ತಡೆಬೇಲಿ ಇರುವ ಸುಂದರ ವಿಶಾಲ ಪಾದಮಾರ್ಗ |
 |
| ದಟ್ಟಬಿಳಿಯ ಎದ್ದುಕಾಣುವ ಜೀಬ್ರಾದಾಟು ಪಾದಚಾರಿಗಳಿಗೆ ಕ್ಷೇಮ |
 |
| ಎಷ್ಟೊಂದು ಜೀಬ್ರಾದಾಟುಗಳು |
 |
ಜೀಬ್ರಾದಾಟಿನ ಮೇಲೆ ಒಂದು ನರಪಿಳ್ಳೆ ಕಂಡರೂ ಚಾಲಕರು ವಾಹನಗಳನ್ನು ನಿಲ್ಲಿಸುತ್ತಾರೆ. (ಸಂಚಾರ ಸೂಚಿ ರಹಿತ ರಸ್ತೆಗಳಲ್ಲಿ) |
 |
| ಹೆಚ್ಚು ಜನದಾಟುವ ನಿಲ್ದಾಣ ಸ್ಥಳಗಳಲ್ಲಿ ಜೀಬ್ರಾದಾಟು ವಿನ ಅಗಲ ಕೂಡಾ ಹೆಚ್ಚು |
 |
| ದಾರಿ ಬದಿಯಲ್ಲಿ ಒಂದು ಸಾರ್ವಜನಿಕ ಶೌಚಾಲಯ |
 |
| ಶೌಚಾಲಯದ ಒಳಗಿನ ನಿರ್ಮಲ ಪರಿಸರ |
 |
| ಒಂದು ಕಸವಿಲೆವಾರಿ ವಾಹನ |
 |
| ಟೋಕಿಯೊ: ಒಂದು ಉದ್ಯಾನವನದ ಸೊಬಗು |
 |
| ನೆರಳು ನೀಡುವ ಇಂಗಾಲ ಹೀರುವ ಮರಗಳಿಗೆ ರಕ್ಷಣೆ |
 |
| ಮರಗಳಿಗೆ ಬೀಳದಂತೆ ರಕ್ಷಣೆ |
 |
| ರಸ್ತೆಯ ಬದಿಯ ಹೂಗಳ ಸೊಬಗು |
 |
| ಟೋಕಿಯೊ "ಜಲತೋಟ" (Water park) [ಜಲಜೀವಿಗಳ ಉದ್ಯಾನ] ದ ಹೊರವಿನ್ಯಾಸ |
 |
| ಟೋಕಿಯೊ ನಗರ:ವಾಹನ ನಿಲುಗಡೆಯ ಶಿಸ್ತು. |
Comments
Post a Comment