12.ತುಳು ಲಿಪಿ ಮತ್ತು ತಿಗಳಾರಿ ಲಿಪಿ

 



ತುಳು ಲಿಪಿ - ಅಕ್ಷರಮಾಲೆ ಡಾ|ವೆಂಕಟರಾಜ ಪುಣಿಂಚತ್ತಾಯ ಅವರ ೨೦೧೧ರ ಪ್ರಕಟನೆಯಿಂದ



ತುಳು ಲಿಪಿ - ತೌಳವ ಅಕ್ಷರೊಲು- ವಿನ್ಯಾಸ-ನಿರ್ಮಾಣ: ಪ್ರವೀಣ್'ರಾಜ್ ಎಸ್ ಮಂಜೇಶ್ವರ ೨೦೧೪

ತುಳು ಲಿಪಿ - ಬಳಸಿದ ರಾಷ್ಟ್ರಗೀತೆ ಜನಗಣಮನ ಪದ್ಯಸಾಲುಗಳು (ಲಿರಿಕ್) - ಕರಂಬೀರ್ ಸಿಂಗ್ ರೋಹಿಲ್ಲಾ - ಅವರಿಂದ


ತುಳುಲಿಪಿ ಬಂದದ್ದು ತಮಿಳು ಮೂಲದ ತಿಗಳಾರಿ ಲಿಪಿಯಿಂದ. ತಿಗಳಾರಿ ಉತ್ತರಕನ್ನಡ ಜಿಲ್ಲೆಯಲ್ಲಿ ಬಳಕೆಯಲ್ಲಿತ್ತು. ದುಂಡನೆಯ ಕನ್ನಡ ಲಿಪಿಯ ಪ್ರಭಾವದಿಂದ ತಿಗಳಾರಿ ಲಿಪಿ ದುಂಡಗಾಗಿ ಕರಾವಳಿಯಲ್ಲಿ ತುಳುಲಿಪಿಯಾಗಿ ಬಳಕೆಗೆ ಬಂದಿದೆ..

ತಿಗಳಾರಿ ಬಹುಶಃ ಈಗ ನೇರವಾಗಿ ಬಳಕೆಯಲ್ಲಿ ಇಲ್ಲ. ತಿಗುಳ ಎಂದರೆ ತಮಿಳ. ಅರಿ ಎನ್ನುವುದು ಆರ್ಯದ ರೂಪಾಂತರ. ಅಂದರೆ ತಮಿಳು ಬ್ರಾಹ್ಮಣರು ಬಳಸುತಿದ್ದ ಲಿಪಿ.

ಗ್ರಂಥಲಿಪಿಯಿಂದ ಉದಯಿಸಿದ ಆರ್ಯೆಳುತ್ತು ಲಿಪಿ ಹದಿನಾಲ್ಕನೆಯ ಶತಮಾನದಲ್ಲಿ ವಿಕಾಸಹೊಂದಿತು. ತಮಿಳರ ಆರ್ಯೆಳುತ್ತು ಲಿಪಿ ಮಲಬಾರಿನಲ್ಲಿಯೂ ರೂಡಿಯಲ್ಲಿತ್ತು. ಆರ್ಯೆಳುತ್ತು ಲಿಪಿಯಿಂದ ಮುಂದೆ ತಿಗಳಾರಿ ಲಿಪಿ ರೂಡಿಗೆ ಬಂತು. ತಿಗಳಾರಿ ಯಿಂದ ರೂಪುಗೊಂಡ ತುಳುಲಿಪಿಯಲ್ಲಿ ದೊರೆತ ಪ್ರಥಮ ಕೃತಿ ವಿಷ್ಣುತುಂಗನ ಶ್ರೀ ಭಾಗವತೊದ ಕಾಲ ೧೬೩೦ ಆಗಿರಬಹುದು. ತಿಗಳಾರಿಯಿಂದ ಮಲಯಾಳಂ ಲಿಪಿ ಕೂಡಾ ಬಂದಿದೆ.

*



Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.