2. ಲಚರಿ ಅಂದರೆ ಬ್ಲಾಗ್
ಕಳೆದೆರಡು ದಶಕಗಳಲ್ಲಿ ಅಂತರ್ಜಾಲ ವಿಶ್ವವ್ಯಾಪಿಯಾಗಿ ಬೆಳೆದು ಬಂದಂತೆ ಅದರೊಂದಿಗೆ ಹಲವಾರು ಹೊಸ ಶಬ್ಧಗಳೂ ರೂಢಿಗೆ ಬಂದವು. ಜೋರ್ನ್ ಬರ್ಗರ್ (Jorn Barger) ಎಂಬಾತ ೧೭ ಡಿಸೆಂಬರ್ ೧೯೯೭ ರಂದು ತನ್ನ ಅಂತರ್ಜಾಲದ ಬರಹಗಳಿಗೆ “ವೆಬ್ ಲಾಗ್” (web-log) ಎಂಬ ಹೆಸರು ಕೊಟ್ಟ. ಹಾಗೆ ತರ್ಜುಮೆಮಾಡಿ ನೋಡಿದರೆ “ವೆಬ್” ಅಂದರೆ ಜೇಡರಬಲೆ ಅಥವಾ “ಜಾಲ” (ಅಂತರ್ಜಾಲ ಎಂಬುದರ ಸಂಕ್ಷಿಪ್ತ ರೂಪ). “ಲಾಗ್” ಎಂದರೆ ಹಿಂದೆ ನಾವಿಕರು ಹಡಗುಗಳಲ್ಲಿ ಪ್ರಯಾಣಿಸುವಾಗ ದಿನ ಚರಿ ವಿವರ ಬರೆಯಲು ಬಳಸುತಿದ್ದ ಮರದ ಹಲಗೆ/ದಿಮ್ಮಿ. ಆದುದರಿಂದ ಇಂಗ್ಲೀಷಿನ ಲಾಗಿಗೆ ಸರಳವಾಗಿ “ಚರಿ” ಎನ್ನಬಹುದು. ಅಂದರೆ ಒಟ್ಟಾರೆ “ವೆಬ್ ಲಾಗ್” ಅಂದರೆ ಕನ್ನಡದಲ್ಲಿ “ಜಾಲಚರಿ” ಎನ್ನಬಹುದು. ಎರಡು ವರ್ಷ ಕಳೆದ ಮೇಲೆ, ಏಪ್ರಿಲ್/ಮೇ ೧೯೯೯ ರಲ್ಲಿ ಹೀಗೆ peterme. com ಎಂಬ ವೆಬ್ ಲಾಗ್ ಗಳನ್ನು ಬರೆಯುತಿದ್ದ ಪೀಟರ್ ಮೆರ್‍ಹೋಲ್ಜ್ (Peter Merholz) ಎಂಬಾತ ತಮಾಷೆಗಾಗಿ ತನ್ನ ಬ್ಲಾಗಿನ ಬದಿಪಟ್ಟಿಯಲ್ಲಿ ( ವೆಬ್ ಲಾಗ್) “weblog” ಶಬ್ಧ ವನ್ನು ಪ್ರತ್ಯೇಕಿಸಿ “ we blog “ ಎಂದು ಬರೆದುಕೊಂಡ! ತದನಂತರ ಪೈರಾ ಲ್ಯಾಬ್ಸ್- ಇನ ಇವಾನ್ ವಿಲಿಯಂಸ್ “ಬ್ಲಾಗ್” ...