Posts

Showing posts with the label ಮಂಗಳೂರಿನಲ್ಲಿ ಕನ್ನಡ

5. ಇತಿಹಾಸದ ಮಂಗಳೂರಿನಲ್ಲಿ ಕನ್ನಡ

Image
  ಇತಿಹಾಸದ ಮಂಗಳೂರಿನಲ್ಲಿ ಕನ್ನಡ ಇತಿಹಾಸದ ಅಧ್ಯಾಯಗಳು ಸಾಕಷ್ಟು ಅಸ್ಪಷ್ಟವಾಗಿರುವ ಕಾರಣ, ಮಂಗಳೂರಿನಲ್ಲಿ ಎಷ್ಟು ಹಿಂದಿನಿಂದ ಕನ್ನಡ ಬಳಕೆಯಲ್ಲಿತ್ತು ಎಂಬ ಪ್ರಶ್ನೆಗೆ ಸರಳ ಉತ್ತರ ಹೇಳುವುದು ಸುಲಭವಿಲ್ಲ. ನೀವು ತಾಳ್ಮೆಯಿಂದ ಇತಿಹಾಸ ಓದುವ ಮನೋಭೂಮಿಕೆಯಲ್ಲಿ ಇರುವುದಾದರೆ, ಸಣ್ಣ ಸಣ್ಣ ಕತೆಗಳನ್ನು ಹೇಳುತ್ತೇನೆ, ಕೇಳಿ! . ** ಇತಿಹಾಸವನ್ನು ಸ್ಥೂಲವಾಗಿ ನೋಡುವವರಿಗೆ ವಿಜಯನಗರದ ಅರಸರು ಹದಿನಾಲ್ಕನೆಯ ಶತಮಾನದಲ್ಲಿ ಕರಾವಳಿಗೆ ಲಗ್ಗೆ ಇಟ್ಟ ಮೇಲೆ ಮಂಗಳೂರಿನಲ್ಲಿ ಕನ್ನಡ ಬೇರೂರಿತು ಎಂದು ಅನಿಸುವುದುಂಟು. ಆದರೆ ಅದಕ್ಕೆ ಮೊದಲೇ ಕನ್ನಡ ಮತ್ತು ತುಳು ಅಕ್ಕ-ತಂಗಿಯರಂತೆ ಇತಿಹಾಸದಲ್ಲಿ ಒಟ್ಟಿಗೆ ಜೊತೆ ಜೊತೆಯಲ್ಲಿ ಬೆಳೆದು ಬಂದ ಭಾಷೆಗಳು ಎನ್ನುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಕನ್ನಡನಾಡಿನ ಪ್ರದೇಶಗಳ ಭೌಗೋಳಿಕ ವಿಶಾಲತೆ, ತುಳು ಪ್ರದೇಶಗಳ ಸೀಮಿತ ವ್ಯಾಪ್ತಿ ಹಾಗೂ ಅದಕ್ಕೆ ಸಂಬಂಧಿಸಿದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ, ಇತಿಹಾಸದ ಕಾಲದಲ್ಲಿ ಈ ಎರಡು ಭಾಷೆಗಳ ಬೆಳವಣಿಗೆ ಮತ್ತು ಪ್ರಸಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಎರಡು ಭಾಷೆಗಳು ವಿಕಾಸ ಹೊಂದುತ್ತಾ ಬೆಳೆದು ಬಂದ ಉದ್ದನೆಯ ಕಾಲಮಾನದ ಹಾದಿಯಲ್ಲಿ ಇದೇ ಕರಾವಳಿಯಲ್ಲಿಯೇ ಹಲವು ಉಪಭಾಷೆಗಳು (ಬ್ರಾಹ್ಮಣರ ತುಳು, ಹವ್ಯಕಗನ್ನಡ, ಕುಂದಗನ್ನಡ, ಅಂಕೋಲ-ಕನ್ನಡ ಇತ್ಯಾದಿ) ಉತ್ಪನ್ನವಾಗಿವೆ. ಇತಿಹಾಸದ ಹಾದಿಯಲ್ಲಿ ಒಂದೊಂದೆ ಹೆಜ್ಜೆ ಹಿಂದೆ ಹೋದರೆ,...