2. ಲಚರಿ ಅಂದರೆ ಬ್ಲಾಗ್
ಕಳೆದೆರಡು ದಶಕಗಳಲ್ಲಿ
ಅಂತರ್ಜಾಲ ವಿಶ್ವವ್ಯಾಪಿಯಾಗಿ ಬೆಳೆದು
ಬಂದಂತೆ ಅದರೊಂದಿಗೆ ಹಲವಾರು ಹೊಸ ಶಬ್ಧಗಳೂ
ರೂಢಿಗೆ ಬಂದವು. ಜೋರ್ನ್ ಬರ್ಗರ್ (Jorn
Barger) ಎಂಬಾತ ೧೭ ಡಿಸೆಂಬರ್ ೧೯೯೭ ರಂದು ತನ್ನ
ಅಂತರ್ಜಾಲದ ಬರಹಗಳಿಗೆ “ವೆಬ್ ಲಾಗ್” (web-log) ಎಂಬ ಹೆಸರು ಕೊಟ್ಟ. ಹಾಗೆ ತರ್ಜುಮೆಮಾಡಿ ನೋಡಿದರೆ “ವೆಬ್” ಅಂದರೆ ಜೇಡರಬಲೆ ಅಥವಾ
“ಜಾಲ” (ಅಂತರ್ಜಾಲ ಎಂಬುದರ ಸಂಕ್ಷಿಪ್ತ ರೂಪ). “ಲಾಗ್” ಎಂದರೆ ಹಿಂದೆ ನಾವಿಕರು ಹಡಗುಗಳಲ್ಲಿ ಪ್ರಯಾಣಿಸುವಾಗ
ದಿನಚರಿ
ವಿವರ ಬರೆಯಲು ಬಳಸುತಿದ್ದ ಮರದ ಹಲಗೆ/ದಿಮ್ಮಿ. ಆದುದರಿಂದ ಇಂಗ್ಲೀಷಿನ ಲಾಗಿಗೆ ಸರಳವಾಗಿ “ಚರಿ” ಎನ್ನಬಹುದು. ಅಂದರೆ ಒಟ್ಟಾರೆ “ವೆಬ್ ಲಾಗ್”
ಅಂದರೆ ಕನ್ನಡದಲ್ಲಿ “ಜಾಲಚರಿ” ಎನ್ನಬಹುದು.
ಎರಡು ವರ್ಷ ಕಳೆದ ಮೇಲೆ,
ಏಪ್ರಿಲ್/ಮೇ ೧೯೯೯ ರಲ್ಲಿ ಹೀಗೆ peterme. com ಎಂಬ ವೆಬ್ ಲಾಗ್ ಗಳನ್ನು ಬರೆಯುತಿದ್ದ ಪೀಟರ್ ಮೆರ್‍ಹೋಲ್ಜ್ (Peter Merholz) ಎಂಬಾತ ತಮಾಷೆಗಾಗಿ
ತನ್ನ ಬ್ಲಾಗಿನ ಬದಿಪಟ್ಟಿಯಲ್ಲಿ ( ವೆಬ್
ಲಾಗ್) “weblog” ಶಬ್ಧ ವನ್ನು ಪ್ರತ್ಯೇಕಿಸಿ
“ we blog “ ಎಂದು ಬರೆದುಕೊಂಡ! ತದನಂತರ ಪೈರಾ
ಲ್ಯಾಬ್ಸ್- ಇನ ಇವಾನ್ ವಿಲಿಯಂಸ್ “ಬ್ಲಾಗ್” ಶಬ್ಧ ವನ್ನು ನಾಮಪದ (ಅಂತರ್ಜಾಲ-ಬರಹ) ಹಾಗೂ ಕ್ರಿಯಾಪದವಾಗಿ (ಅಂತರ್ಜಾಲ-ಬರಹ ಬರೆಯುವುದು/ ಸಂಪಾದಿಸುವುದು ಇತ್ಯಾದಿ ಎಂಬರ್ಥದಲ್ಲಿ) ಬಳಕೆ ಮಾಡಲಾರಂಭಿಸಿದ. ಹೀಗೆ ತುಂಟತನದಿಂದ ಹುಟ್ಟಿಕೊಂಡು ಚಾಲ್ತಿಗೆ ಬಂದ ಪದ “ಬ್ಲಾಗ್” ಇಂದು
ಅಂತರ್ಜಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.
ಪೈರಾ ಲ್ಯಾಬ್ಸ್ ನ ಇವಾನ್ ವಿಲಿಯಂಸ್ ಮತ್ತು ಮೆಗ್ ಹೊರಿಹಾನ್ಸ್ ಆಗಸ್ಟ್ ೧೯೯೯ ರಲ್ಲಿ ಬ್ಲಾಗರ್ ಡಾಟ್ ಕಾಮ್ ಎಂಬ ಜಾಲತಾಣವನ್ನು ಆರಂಭಿಸಿದರು.
ಇದನ್ನು ಫೆಬ್ರುವರಿ ೨೦೦೩ ರಲ್ಲಿ ಗೂಗಲ್ ಕಂಪೆನಿ
ಕೊಂಡುಕೊಂಡಿತು.
ಹಾಗೆಯೇ ಕನ್ನಡದಲ್ಲಿ ಈ ಬ್ಲಾಗ್ ಆರಂಭಿಸುವಾಗ ಈ “ಬ್ಲಾಗ್” ಅನ್ನುವ ಶಬ್ಧ ಪರಕೀಯ ಅನಿಸಿತು.
ಬ್ಲಾಗಿಗೆ ಕನ್ನಡದಲ್ಲಿ ಕೆಲವರು “ಮಿಂಬರಹ”
ಎಂಬ ಶಬ್ಧ ಠಂಕಿಸಿದ್ದಾರೆ. “ಮಿಂಚಂಚೆ” ಎನ್ನುವ ಪದ ಈಗಾಗಲೆ ಈಮೇಲ್ ಗಾಗಿ ಮುಡುಪಾಗಿದೆ. ಪಾಶ್ಚಾತರ ತುಂಟುತನದ ಅಣಕಿನಂತೆ ಕನ್ನಡದಲ್ಲಿ ಹೊಸ ಪ್ರಯೋಗ ಏಕೆ ಮಾಡಬಾರದು ಎಂದನಿಸಿದಾಗ
“ಜಾಲಚರಿ” (ವೆಬ್ ಲಾಗ್) ಅನ್ನು ಮೊಟಕುಗೊಂಡು
“ಬ್ಲಾಗ್” ಶಬ್ಧಕ್ಕೆ ಪರ್ಯಾಯವಾಗಿ “ಲಚರಿ”
ಹುಟ್ಟಿಕೊಂಡಿತು.
ನಿಮಗೆ ಈ ಹೊಸ ಪದ ಲಚರಿ
ಇಷ್ಟವಾದರೆ ನೀವೂ ಬಳಸಿಕೊಳ್ಳಿ.
Comments
Post a Comment