6.ಭೂಮಿಯ ಅಂತರಾಳ ಬಗೆದವಳು: ಇಂಗೆ ಲೇಮನ್
ನಿ ಯತವಾಗಿ ಸೂರ್ಯನ ಸುತ್ತ ಬುಗುರಿಯಂತೆ ತಿರುಗುವ ಈ ಭೂಮಿ 6370 ಕಿಲೋಮೀಟರ್ ತ್ರಿಜ್ಯದ ಒಂದು ದೊಡ್ಡ ಗ್ರಹ. ನಮ್ಮ ಭೂಮಿಯ ಒಳಗೇನಿದೆ? ಭೂಮಿಯ ಅಂತರಂಗದಲ್ಲಿ ಏನಿದೆ ಎಂದು ನೋಡುವ ಹಂಬಲ ಅನೇಕರಿಗೆ ಇದ್ದರೂ, ಇಣುಕಲು ಯಾವುದೇ ಕಿಂಡಿ ಕಿಟಿಕಿಗಳು ಇರದ ಕಾರಣ ...ಅದು ಅಸಂಭವ! ** ಭೂಮಿಯ ಅಂತರಂಗದಲ್ಲಿ ಮುಖ್ಯವಾಗಿ ಮೂರು ವಲಯಗಳಿವೆ. ಭೂಮಿಯ ಹೊರವಲಯದಲ್ಲಿ ಕಾಣುವ (೧) ತೊಗಟೆ (ಅಥವಾ ಹೊರಹೊದಿಕೆ; Crust), ಆನಂತರದ (೨) ಆವರಣ (Mantle) ಮತ್ತು ಕೇಂದ್ರಭಾಗದಲ್ಲಿರುವ (೩) ಭೂಗರ್ಭ (Core). ಭೂಮಿಯೊಳಗೆ ಆಳಕ್ಕೆ ಹೋದಂತೆ ಉಷ್ಣತೆ ಹೆಚ್ಚುವುದನ್ನು ಗಣಿಗಳಲ್ಲಿ ಹಾಗೂ ಭೂ-ಉಷ್ಣ geothermal ಶಕ್ತಿಗಳ ಅಧ್ಯಯನಗಳಿಂದ ಮನಗಾಣಲಾಗಿತ್ತು. ಅದರಂತೆ, ಭೂಮಿಯ ಒಳಭಾಗ ಅತೀವ ಉಷ್ಣತೆಯ ಕಾರಣದಿಂದ ಕರಗಿದ ಲೋಹದಂತಿರಬಹುದು ಎಂಬ ಊಹೆ ಇತ್ತು. ಇಂತಹ ಊಹೆಗಳಿಗೆ ಸಮರ್ಥ ಉತ್ತರ ನೀಡಿದ ಭೂಕಂಪವಿಜ್ಞಾನಿಯೇ ಇಂಗೆ ಲೇಮನ್. ** ಇಂಗೆ ಲೇಮನ್ (ಜನನ: ೧೩ ಮೇ ೧೮೮೮ - ಮರಣ: ೨೧ ಫೆಬ್ರುವರಿ ೧೯೯೩; Inge Lehmann) ಡೆನ್ಮಾರ್ಕ್ ದೇಶದ ಹೆಸರಾಂತ ಭೂಭೌತವಿಜ್ಞಾನಿ (Geophysicist) . ಕೋಪೆನ್'ಹೇಗನ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಯಗಳಲ್ಲಿ ಗಣಿತ ಆಧ್ಯಯನ ಮಾಡಿದ ಆಕೆ ಭೂಕಂಪವಿಜ್ಞಾನದಲ್ಲಿ (seismology ) ಪರಿಣಿತರಾಗಿದ್ದಳು. ಇಂಗೆ ಲೇಮನ್ ೧೯೨೫ ರಿಂದ ೧೯೫೨ ರವರೆಗೆ ರಾಯಲ್ ಡಾನಿಶ್ ಜಿಯೊಡೇಟಿಕ್ ಇನ್'ಸ್ಟಿಟ್ಯೂಟಿನಲ್ಲಿ ಸೇವೆ ಸ...