Posts

Showing posts from August, 2017

೩. ಜೋಗುಳ- ಒಂದು ಶಬ್ಧ ಮಿಮಾಂಸೆ

ಚಿಕ್ಕ ಮಕ್ಕಳು ನಿದ್ದೆ ಹೋಗಲೆಂದು  ತೊಟ್ಟಿಲು ತೂಗುವಾಗ ತಾಯಂದಿರು  ಹಾಡುವ (ಅಥವಾ ಹಾಡುತಿದ್ದ) “ಜೋಗುಳ” ಎಂಬ ಮಧುರ ಪದದ ಮೂಲ ಏನು? ಮನಸ್ಸನ್ನು ಕಾಡಿದ ಈ ಪದಕ್ಕೆ ನನಗೆ ತಿಳಿದ ಕನ್ನಡದ ಪದಕೋಶಗಳಲ್ಲಿ ಹುಡುಕಾಡಿದರೂ ಜೋಗುಳದ ಪದಾರ್ಥ(ಪದ +ಅರ್ಥ ) ಹೊರತುಪಡಿಸಿ  ಮೂಲದ ಬಗ್ಗೆ ಯಾವುದೆ ಹೆಚ್ಚುವರಿ ಸೂಚನೆ ದೊರೆಯಲಿಲ್ಲ. ಕನ್ನಡಕ್ಕೆ  ಹತ್ತಿರದಲ್ಲಿ ಇರುವ, ತುಳು ಭಾಷಿಕರಿಗೆ “ಜೋಗುಳ” (=ಮಕ್ಕಳ ನಿದ್ದೆ ಹಾಡು) ಎಂದಾಗ ಮೊದಲಿಗೆ ಮನಸಿಗೆ ಬರುವುದು ತುಳುವಿನ “ಜೋಕುಳು”(=ಮಕ್ಕಳು)  ಎಂಬ ಸಮಾಂತರ  ಧ್ವನಿಯ ಶಬ್ಧ. “ಜೋಕುಳು”  ಶಬ್ಧ ಕನ್ನಡದಲ್ಲಿ  ಈಗಂತೂ ಇದ್ದಂತಿಲ್ಲ; ಹಿಂದೆ ಒಂದಾನೊಂದು ಕಾಲದಲ್ಲಿ ಇದ್ದಿರಬಹುದು.  ಈ  ಎರಡು ಶಬ್ಧ ಗಳಿಗೆ ಏನಾದರೂ  ಹತ್ತಿರದ ಸಂಬಂಧವಿ(ದ್ದಿ)ರ ಬಹುದೆ? ತುಳುವಿನಲ್ಲಿ “ಜೋಗುಳ”  ಶಬ್ಧ ನಿಘಂಟಿನಲ್ಲಿ ಇದ್ದರೂ ಸಾಮಾನ್ಯವಾಗಿ ಬಳಕೆ ಕಡಿಮೆ. ತುಳುವಿನ “ಜೋಕುಳು(ಲು)” ಎಂಬುವುದು “ಜೋವುಕುಳು” (=ಜೀವಿಗಳು) ಎಂಬುದರ ಮೊಟಕುಗೊಳಿಸಿದ  ಪರ್ಯಾಯ ರೂಪ.  ತುಳುವಿನಲ್ಲಿ  “ಜೋವು”(=ಜೀವಿ , > ವ್ಯಕ್ತಿ) ಕ್ಕೆ ಹತ್ತಿರ ಇರುವ ಶಬ್ಧಗಳು “ಜೂವ” (=ಜೀವ), “ಜೂವನ” (=ಜೀವನ). ಒಂದು ವರ್ಗದ ತುಳುವರು “ಜೋವು” (=ಜೀವಿ) ಎಂಬ ಪದವನ್ನು ಹೆಣ್ಣು ಅಥವಾ ಹೆಣ್ಣುಮಗಳು ಎಂಬರ್ಥದಲ್ಲಿ ಬಳಸುತ್ತಾರೆ. ಉಳಿದವರು ಸ್ಪಷ್ಟವಾಗ...

2. ಲಚರಿ ಅಂದರೆ ಬ್ಲಾಗ್

ಕಳೆದೆರಡು ದಶಕಗಳಲ್ಲಿ ಅಂತರ್ಜಾಲ  ವಿಶ್ವವ್ಯಾಪಿಯಾಗಿ  ಬೆಳೆದು  ಬಂದಂತೆ  ಅದರೊಂದಿಗೆ ಹಲವಾರು ಹೊಸ ಶಬ್ಧಗಳೂ ರೂಢಿಗೆ ಬಂದವು. ಜೋರ್ನ್ ಬರ್ಗರ್‍  (Jorn Barger) ಎಂಬಾತ ೧೭ ಡಿಸೆಂಬರ್ ೧೯೯೭ ರಂದು  ತನ್ನ  ಅಂತರ್ಜಾಲದ ಬರಹಗಳಿಗೆ  “ವೆಬ್ ಲಾಗ್” (web-log) ಎಂಬ ಹೆಸರು ಕೊಟ್ಟ. ಹಾಗೆ  ತರ್ಜುಮೆಮಾಡಿ ನೋಡಿದರೆ “ವೆಬ್” ಅಂದರೆ ಜೇಡರಬಲೆ ಅಥವಾ “ಜಾಲ” (ಅಂತರ್ಜಾಲ ಎಂಬುದರ ಸಂಕ್ಷಿಪ್ತ ರೂಪ). “ಲಾಗ್” ಎಂದರೆ ಹಿಂದೆ ನಾವಿಕರು ಹಡಗುಗಳಲ್ಲಿ ಪ್ರಯಾಣಿಸುವಾಗ  ದಿನ ಚರಿ ವಿವರ ಬರೆಯಲು ಬಳಸುತಿದ್ದ ಮರದ ಹಲಗೆ/ದಿಮ್ಮಿ. ಆದುದರಿಂದ ಇಂಗ್ಲೀಷಿನ ಲಾಗಿಗೆ  ಸರಳವಾಗಿ “ಚರಿ” ಎನ್ನಬಹುದು. ಅಂದರೆ ಒಟ್ಟಾರೆ “ವೆಬ್ ಲಾಗ್” ಅಂದರೆ ಕನ್ನಡದಲ್ಲಿ “ಜಾಲಚರಿ” ಎನ್ನಬಹುದು. ಎರಡು ವರ್ಷ  ಕಳೆದ  ಮೇಲೆ, ಏಪ್ರಿಲ್/ಮೇ ೧೯೯೯ ರಲ್ಲಿ  ಹೀಗೆ  peterme. com ಎಂಬ ವೆಬ್ ಲಾಗ್ ಗಳನ್ನು ಬರೆಯುತಿದ್ದ  ಪೀಟರ್‍  ಮೆರ್‍ಹೋಲ್ಜ್ (Peter Merholz) ಎಂಬಾತ  ತಮಾಷೆಗಾಗಿ  ತನ್ನ ಬ್ಲಾಗಿನ  ಬದಿಪಟ್ಟಿಯಲ್ಲಿ ( ವೆಬ್ ಲಾಗ್) “weblog”  ಶಬ್ಧ ವನ್ನು  ಪ್ರತ್ಯೇಕಿಸಿ   “  we blog “ ಎಂದು ಬರೆದುಕೊಂಡ!  ತದನಂತರ  ಪೈರಾ ಲ್ಯಾಬ್ಸ್- ಇನ  ಇವಾನ್ ವಿಲಿಯಂಸ್  “ಬ್ಲಾಗ್” ...

1.ಹಂಪನಕಟ್ಟೆ ದಾರಿದಾಟುವ ಪಾದಾಚಾರಿಗಳ ಪರದಾಟ

Image
ಸ್ಮಾ ರ್ಟ್ ಸಿಟಿ ಆಗುವ  ಹಂಬಲದಲ್ಲಿರುವ  ನಮ್ಮ ಮಂಗಳೂರು  ನಗರದಲ್ಲಿ ಹಲವಾರು  ಮೂಲಭೂತ  ಸೌಕರ್ಯಗಳ ಪರಿಸ್ಥಿತಿ ಸುಧಾರಿಸ  ಬೇಕಾದಂತಹ  ಅಗತ್ಯವಿದೆ. ಮಂಗಳೂರು ನಗರದ  ಸಹಜ ಸಮಸ್ಯೆಗಳಲ್ಲಿ ಒಂದು ಹಂಪನಕಟ್ಟೆಯಂತಹ   ವಾಹನ ನಿಬಿಡ  ಪ್ರದೇಶಗಳಲ್ಲಿ  ರಸ್ತೆ ದಾಟುವಾಗ ಸಾಮಾನ್ಯ  ಪಾದಚಾರಿಗಳು ದಿನ ನಿತ್ಯ ಅನುಭವಿಸುವ  ಪರದಾಟ ಮತ್ತು ಸಂಕಟ. ಹಾಗೆ ನೋಡಿದರೆ ನಮ್ಮ ಸರಕಾರಿ  (ಅ)ವ್ಯವಸ್ಥೆಯಲ್ಲಿ ರಸ್ತೆಗಳನ್ನು ವಾಹನಗಳಿಗಾಗಿ ಮಾತ್ರಾ ರಚನೆಮಾಡಿದಂತಿದೆ. ಶ್ರೀಸಾಮಾನ್ಯರು ಬಳಸುವ ಪಾದಮಾರ್ಗ (ಪುಟ್ ಪಾತ್) ಗಳ  ಸೂಕ್ತ ನಿರ್ವಹಣೆಯ ಬಗೆಗೆ ನಮ್ಮನ್ನು ಆಳುವವರಿಗೆ, ನಗರಸಭೆಗಳಿಗೆ ಅತೀವ  ತಾತ್ಸಾರವಿದ್ದಂತಿದೆ.  ಉದಾಹರಣೆಗೆ, ಸೆಂಟ್ರಲ್ ಟಾಕೀಸಿನಿಂದ ಪಿರೇರಾ ಹೊಟೇಲಿಗೆ ನಡೆದು ಬರುವ ದುರ್ಗಮ ಪಾದ(ಚಾರಿ)ಮಾರ್ಗದ  ಅ(ವ್ಯ)ವಸ್ಥೆ  ಜಗತ್ತಿನ ಅತ್ಯಂತ  ಕೆಟ್ಟ ವಿನ್ಯಾಸದ  ಪಾದಮಾರ್ಗ  ಎಂಬ ಹೆಗ್ಗಳಿಕೆಗೆ  ಗಿನ್ನೆಸ್  ದಾಖಲೆಗಾಗಿ  ಕಾಯುತಿರುವಂತಿದೆ. ಟೋಕಿಯೋ ನಗರದ ಜೀಬ್ರಾದಾಟುಗಳ ಸೌಂದರ್ಯ ೧ ಟೋಕಿಯೋ ನಗರದ ಪಾದಮಾರ್ಗಗಳ ಮತ್ತು ಜೀಬ್ರಾದಾಟುಗಳ ಸೌಂದರ್ಯ ೨ ಜಗತ್ತಿನ  ಸುಂದರ  ನಗರಗಳಲ್ಲಿ ಒಂದಾದ  ಟೋಕಿಯೋ  “ಪಾದಚಾರಿಗಳ ನಗರ” ಅಥವಾ “ ...