Posts

Showing posts from March, 2021

10. ಕನ್ನಡ ನಾಡಿನ ಪೂರ್ವೇತಿಹಾಸ -ಕಡಲ ವ್ಯಾಪಾರಗಳೂ ವಿದೇಶಿ ಸಂಪರ್ಕಗಳೂ

Image
ಕನ್ನಡನಾಡಿನ ಪೂರ್ವೇತಿಹಾಸದ ಅಂಧಕಾರದಲ್ಲಿ ಅಡಗಿರುವ ಪ್ರಾಚೀನ ವಿದೇಶಿ ಸಂಪರ್ಕಗಳ ನಿಗೂಢ ಹೊಳಹುಗಳು ಕುತೂಹಲಕಾರಿಯಾಗಿವೆ ಆಫ್ರಿಕಾ ಖಂಡದ ಹಾಗೂ ಮೆಡಿಟರೇನಿಯನ್ ವಲಯದ ಹಲವು ದೇಶಗಳಲ್ಲಿ ಆಗಿರುವಷ್ಟು ವ್ಯಾಪಕ ಪೂರ್ವೇತಿಹಾಸ ಸಂಶೋಧನೆ ನಮ್ಮಲ್ಲಿ ಇನ್ನೂ ಆಗದೆ ಇರುವುದು ನಮ್ಮ ಮುಂದಿರುವ ದೊಡ್ಡ ಸವಾಲು ಆಗಿದೆ. ನನ್ನ ಗಮನಕ್ಕೆ ಬಂದ ಪೂರ್ವೇತಿಹಾಸದ ಹಲವು ಪೂರಕ ಮಾಹಿತಿಗಳು ಇಲ್ಲಿವೆ: ಚಿತ್ರ ೧:ಕಡಲ ವ್ಯಾಪಾರ.... ** ಕರಾವಳಿ ಪ್ರದೇಶ ಪೂರ್ವೇತಿಹಾಸ ಕಾಲದಿಂದಲೂ ಕನ್ನಡ ನಾಡಿನ ಎಲ್ಲಾ ಅರಸರಿಗೆ ಕಡಲ ಕಡೆಯ ಹೆಬ್ಬಾಗಿಲು ಆಗಿತ್ತು. ಕನ್ನಡದ ರಾಜ್ಯಗಳ ಸ್ಥಾಪನೆಯ ಇತಿಹಾಸದಲ್ಲಿ ಕರಾವಳಿಯ ಸಾಹಸೀ ಯುವಕರ ಪಾತ್ರ ದೊಡ್ಡದಿದೆ. ಇತಿಹಾಸದ ಕದಂಬರು, ಆಳುಪರು, ಗಂಗರು ಮತ್ತು ಪುನ್ನಾಟರು ಕರಾವಳಿಯ ಜಿಗಿಹಲಗೆ (spring board) ಯಿಂದ ಸಹ್ಯಾದ್ರಿಯ ಆಚೆಗೆ ನೆಗೆದು ಪ್ರಾಚೀನ ಕನ್ನಡ ರಾಜ್ಯಗಳ ಸ್ಥಾಪನೆಯಲ್ಲಿ ಕೈಜೋಡಿಸಿದವರೇ ಆಗಿದ್ದಾರೆ. ಇತಿಹಾಸದ ಉದ್ದಕ್ಕೂ ಕರಾವಳಿಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ಉಳಿದಿರಲು, ತುಳು ಮುಂತಾದ ಉಳಿದ ಸ್ಥಳೀಯ ಭಾಷೆಗಳು ಬರವಣಿಗೆ ವಂಚಿತ, ಸಂಪರ್ಕದ ಮಾತುಗಳಾಗಿಯೇ ಇತಿಹಾಸದ ನೇಪಥ್ಯದ ಹಿಂದೆ ಉಳಿದಿರಲು ಕಡಲ ಮೂಲದ ವ್ಯಾಪಾರ ಸಂಪರ್ಕ-ಸಂಘರ್ಷಗಳು ಪ್ರಮುಖ ಕಾರಣವಾಗಿದೆ. ** ಮಾನವನ ಉಗಮ ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾಖಂಡದಲ್ಲಿ ಆಯಿತೆಂದು ಜೀವವಿಜ್ಞಾನಿಗಳು ತಿಳಿಸಿದ್ದಾರೆ. ಇತಿಯೋಪಿಯಾದ ...

9. ಅರ್ಕಾವೊತ್ತು, ಅರ್ಕಾರ ಮತ್ತು ಅನ್ಕಾರ

Image
= ಅರ್ಕಾರದ ಸ್ಥಾನ ಗೊಂದಲ ಗೊಂದಲ ಮಾನವ ಸಹಜ ಗುಣ. ಆದರೆ ಜವಾಬ್ದಾರಿ ನಿರ್ವಹಿಸುವ ಹಂತದಲ್ಲಿ ಗೊಂದಲಗೊಂಡರೆ ಏನಾಗ ಬಹುದು- ಎನ್ನುವುದಕ್ಕೆ ಕನ್ನಡದ ವರ್ಣಮಾಲೆಯಲ್ಲಿ ಅರ್ಕಾರದ ಸ್ಥಾನ ಗೊಂದಲವೇ ಸಾಕ್ಷಿ. = ಚಿತ್ರ೧ : ಅರ್ಕಾರದ ಸ್ಥಾನ ಗೊಂದಲ. ನಿರ್-ದೇಶಕ >ನಿರ್ದೇಶಕ = ಆಶೀರ್-ವಾದ >ಆಶೀರ್ವಾದ = "ರ್" ಹಾಲಿ ಇರುವ ಮತ್ತು ಇರಬೇಕಾಗಿದ್ದ (ಬಾಣ) ಎಡೆಗಳು = ಅರ್ಕಾರ (ಅರ್-ಕಾರ) ಅಥವಾ ಅರ್ಕಾವೊತ್ತು: ಮೊದಲನೆ ಗೊಂದಲ ಆಗಿದ್ದು ಹೆಸರಿಡುವಾಗ. ಅರ್ಕಾವೊತ್ತು ಅಂದರೆ ಒತ್ತು ಅಕ್ಷರಗಳಲ್ಲಿ ಒಂದು ಎಂದು ನಾವು ತಿಳಿದುಕೊಳ್ಳಬೇಕಾಗಿದೆ. ಆದರೆ ಒತ್ತಕ್ಷರಗಳ ಪಟ್ಟಿಯಲ್ಲಿ ಅರ್ಕಾವೊತ್ತು ಕಾಣೆಯಾಗಿದೆ! =ಚಿತ್ರ ೨ ಕನ್ನಡದ ಒತ್ತಕ್ಷರಗಳ ಚಿತ್ರ = = ಅರ್ಕಾವೊತ್ತು: ಪದ ಹೇಗೆ ಹುಟ್ಟಿತು? ಅರೆ+ರ್+ಕಾರ+ಒತ್ತು > ಅರ್ಕಾರವೊತ್ತು > ಅರ್ಕಾವೊತ್ತು. ಒತ್ತಕ್ಷರಗಳ ಪಟ್ಟಿಯಲ್ಲಿ ಬಾರದ/ಕಾಣಿಸಿಕೊಳ್ಳದ ನಾಚಿಕೆ ಅರ್ಕಾವೊತ್ತಿಗೆ ಏಕೆ? ಏಕೆಂದರೆ: ರಕಾರದ ಒತ್ತಕ್ಷರವಾದ - ರ್ರ- ಈ ಪಟ್ಟಿಯಲ್ಲಿ ಮೊದಲೇ ಬಂದು ಕೂತಿದೆ. ಹಾಗಿದ್ದರೆ, ಈ ಅರ್ಕಾವೊತ್ತು ಎಲ್ಲಿ ಹೋಗಬೇಕು? ಹೋಹೋ! ನೀನು ಅರ್ಕಾವೊತ್ತಲ್ಲ, ಅರ್ಕಾರ = ಅರೆ-ರ್/ರಕಾರ ! ನಿನ್ನ ಸರಿಯಾದ ಜಾಗ ಯೋಗವಾಹಕಗಳ ನಡುವೆ: ಅಂ- - ಅಃ ಅನ್ನುವ ಸ್ವರಗಳ ನಡುವೆ ಅರ್ಕಾರವಾಗಿ ಕೂತುಕೊ! ಬೇಕಾದರೆ, ಆ ನಿನ್ನ ಆ ಅನ್ಕಾರ ವನ್ನು ಅಲ್ಲಿಗೆ ಕರೆದುಕೊಂಡು ಹೋಗು! ಅದ್...

8. ಆಳುಪರ ಇತಿಹಾಸ

Image
  ಕನ್ನಡದಲ್ಲಿ ಮೊದಲನೆಯದು ಎನ್ನಲಾದ ಕದಂಬರ ಕಾಲದ ಹಲ್ಮಿಡಿಯ ಶಾಸನದಲ್ಲಿ ಅಳುಪ ಗಣದ ಹೆಸರಿದೆ. ಕದಂಬರೊಂದಿಗೆ ಸೇರಿಕೊಂಡ ಮೇಲೆ ಆಳುಪರು ಪ್ರಸಿದ್ದಿಗೆ ಬಂದಂತೆ ಕಂಡು ಬರುತ್ತದೆ. ಆಳುಪ ವಂಶದವರು ಒಂದೂವರೆ ಸಾವಿರ ವರ್ಷಗಳ ಹಿಂದೆ ತುಳುನಾಡು ಮತ್ತು ಮಲೆನಾಡಿನ ಭಾಗಗಳನ್ನು ಆಳಿದ ಅರಸರು. ಸಾಮಾನ್ಯಶಕೆಯ ನಾಲ್ಕನೆ ಶತಮಾನದಿಂದ (ಸಾ.ಶ:೪೨೫) ಹದಿನೈದನೆ ಶತಮಾನದ ಆರಂಭದವರೆಗೆ (ಸಾ.ಶ:೧೪೧೦) ಕೊಡಲ (< ಕುಡಲ)/ಪ್ರಾಚೀನ ಮಂಗಳೂರು) ಅಲ್ಲದೆ, ಬನವಾಸಿ,ಉದ್ಯಾವರ, ಬಾರಕೂರು, ಪಟ್ಟಿಪೊಂಬಚ್ಚಪುರ (ಈಗಿನ ಊರಹೆಸರು: ಹುಂಬುಜ/ಹುಂಚ), ಮೂಡಬಿದ್ರೆ ಮತ್ತು ಮಂಜೇಶ್ವರ ಕೇಂದ್ರಗಳಿಂದ ಆಳಿದರು. ಅಂದರೆ ಇಂದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಅಂದಿನ ಊರುಗಳಲ್ಲಿ ಓಡಾಡಿ ಹೋರಾಡಿ ಬಾಳಿ ಆಳಿ ಅಳಿದುಹೋದವರು. ಇತಿಹಾಸಕಾರರು ಆಳುಪರು ಸುದೀರ್ಘಕಾಲ - ಸಾಮಾನ್ಯ ಶಕ ೪೦೦ ರಿಂದ ೧೩೦೦- ತುಳುನಾಡನ್ನು ಆಳಿದರೆಂದರೆಂದು ಪ್ರತಿಪಾದಿಸಿದರೂ, ಸಾ.ಶ. ೪೦೦ ಪೂರ್ವಕಾಲದ ಆಳುಪರ ವಿವರಗಳು ಸಾಕಷ್ಟು ಅಸ್ಪಷ್ಟವಾಗಿದೆ. ಅಳುಪರ ಪೂರ್ವ ಚರಿತ್ರೆ ಸಂಗಂ ಕಾವ್ಯಗಳಲ್ಲಿ ಆಳುಪರ ಉಲ್ಲೇಖವಿಲ್ಲದೆ ಬಿಟ್ಟು ಹೋಗಿದೆ! ಬಹುಶ: ಸಂಗಂ ಅಗನಾನೂರು ರಚನೆಯಾದಾಗ (ಅಂದಾಜು ಸಾಶ ೧೦೦-೨೦೦) ಅಳುಪರು ಇನ್ನೂ ಅರಸರಾಗಿರಲಿಲ್ಲ. ಗ್ರೀಕರ ಆ ಕಾಲದ ವರದಿಗಳು ಸೂಚಿಸುವಂತೆ ಜೀವನಕ್ಕಾಗಿ ಕಡಲಲ್ಲಿ ಪಾಂಡಿಗಳನ್ನು ಚಲಾಯಿಸಿ ವ್ಯಾಪಾರ ವಹಿವಾಟು ಮ...

7.ಮಂಗಳೂರಿನ ಹೆಸರುಗಳ ಇತಿಹಾಸ

Image
  ಮಂಗಳೂರಿನ ಹೆಸರುಗಳ ಇತಿಹಾಸ ಇಂದಿನ ಮಂಗಳೂರು ಕನಿಷ್ಟ ಐದು ಸಾವಿರ ವರ್ಷಗಳ ಇತಿಹಾಸ ಕಾಲ ನೋಡಿದೆ. ಊರು ಬೆಳೆದು ಬಂದ ಕಾಲಘಟ್ಟಗಳಲ್ಲಿ ಬಗೆಬಗೆಯ ವಿಶಿಷ್ಟ ಹೆಸರುಗಳನ್ನು ಹೊತ್ತು ಬಂದಿದೆ. ಹೆಸರುಗಳೇ ಇತಿಹಾಸ ಹೇಳುವಂತಿವೆ. ಮಂಗಳೂರಿಗೆ ಈ ಹೆಸರು ಹೇಗೆ ಬಂತು? ಯಾವಾಗ ಬಂತು?ಆ ಮೊದಲು ಇದ್ದ ಬಗೆ ಬಗೆಯ ಹೆಸರುಗಳಾವು? ವಿಕಾಸದ ಸುದೀರ್ಘ ಹಾದಿಯಲ್ಲಿ ಪಡುವಣ ಕಡಲ ತೀರದ ಮನಮೋಹಕ ಊರು ಮಂಗಳೂರು ಸಂಪಾದಿಸಿದ ಹೆಸರುಗಳು ಯಾವುವು? ಮಂಗಳಾದೇವಿಯ ದೇವಸ್ಥಾನದಿಂದ ನಗರಕ್ಕೆ ಹೆಸರು ಬಂತು ಎನ್ನುವುದು ಸರಳ ಜನಪ್ರಿಯ ವಾದ. ಆದರ ನಡುವೆ ಈ ದೇಗುಲ ಸ್ಥಾಪನೆ ಅಗುವ ಮೊದಲೇ ಊರಿಗೆ ಮಂಗಲ/ಮಂಗಲಾಪುರ ಎಂಬ ಹೆಸರಿತ್ತು ಎನ್ನುವ ವಾದವೂ ಇದೆ. ಆ ಹಳೆಯ ಹೆಸರುಗಳ ಹಿಂದೆ ದೊರೆಯುವ ಕತೆಗಳೇನು? ** ಮಂಗಳೂರು: ಇಂದು ನೋಡುಗರಿಗೆ ಮಂಗಳೂರು ಎರಡು ನದಿಗಳ ತೆಕ್ಕೆಯ ನಡುವೆ ಮಗುವಿನಂತೆ ಬೆಳೆದ ಊರಿನಂತೆ ಕಾಣುತ್ತದೆ. ಈಗಿರುವಂತೆ ನಗರದ ಬಡಗಣ ಮಗ್ಗುಲಲ್ಲಿ ಗುರುಪುರ (ಫಲ್ಗುಣಿ) ಮತ್ತು ತೆಂಕಣ ಮಗ್ಗುಲಲ್ಲಿ ನೇತ್ರಾವತಿ ನದಿಗಳು ಮೂಡಣ ದಿಕ್ಕಿನಿಂದ ಬಂದು ಪಡುವಣದೆಡೆಗೆ ಹರಿಯುತ್ತವೆ. ಈ ನದಿಗಳು ಸಹ್ಯಾದ್ರಿ ಘಟ್ಟಗಳಿಂದ ಉಗಮಿಸಿ ಹೊರಟು ಮಂಗಳೂರಿನ ಬಳಿ ಚಂದದ ಕಡಲನ್ನು ನೋಡಿ ಸೇರಲು ಬಂದಿವೆ! ಇದು ಇವತ್ತು ನಿನ್ನೆಯ ಕತೆಯಲ್ಲ: ಈ ನದಿಗಳು ಏನಿಲ್ಲವೆಂದರೂ ಕನಿಷ್ಟ ಎಂಟು ಹತ್ತು ದಶಲಕ್ಷ ವರ್ಷಗಳಿಂದ ಕಡಲಿನೆಡೆಗೆ ಹರಿಯುತ್ತಿವೆ! ...