11. ಕೊಡಗು ಪದ ಚಿಂತನೆ

 ಕೊಡಗು - ಈ ಪ್ರಾಚೀನ ಪದ ದ್ರಾವಿಡ ಪೂರ್ವದ ಆದಿವಾಸಿ ಜನಾಂಗಗಳ ಭಾಷೆಯಿಂದ ಬಂದಿರುವಂತಿದೆ. ಸರಳ ಸಣ್ಣ ಸಣ್ಣ ಅಕ್ಷರರೂಪದ ಪದಗಳು ಈ ಪ್ರಾಚೀನ ಭಾಷೆಗಳ ಲಕ್ಷಣವಾಗಿದೆ.



ಕೊಡ+ಗು

ಕೊಡ: "ಕುಡ" ಎನ್ನುವುದರ ಇನ್ನೊಂದು ರೂಪ. ಕುಡ >ಕೊಡ.

(ಕೊಡ - ಎನ್ನುವ ಪದಕ್ಕೆ ಕನ್ನಡ /ದ್ರಾವಿಡ ಭಾಷೆಗಳಲ್ಲಿ ಇತರ ಅರ್ಥಗಳಿವೆ. ಅವುಗಳು ಬಹುಶಃ ಈ ಪ್ರಾಚೀನ ಪದಕ್ಕೆ ಅನ್ವಯಿಸುವುದಿಲ್ಲ. "ಕುಡ" - ಈ ಪದ "ಕುಡಲ" > "ಕೊಡಿಯಾಲ" ದಲ್ಲೂ ಬಂದಿದೆ.)

ಕುಡ/ಕೊಡ = ಕು+ಡ. = ಉತ್ತಮ ನೆಲ/ಭೂಮಿ.

ಗ/ಗು/ಗಿ/ಕ/ಕಿ = ಜನವಸತಿ (ಗ್ರಾಮ ಇತ್ಯಾದಿ. ಇಲ್ಲಿರುವ ಅವ್ಯಯ "ಗ" - ನಂತರದ ಗಾಂವ್/ಗ್ರಾಮ ಪದದ ಪ್ರಾಚೀನ ಮೂಲ ರೂಪ ಅನಿಸುತ್ತದೆ. ಉದಾಹರಣೆಗಳು: ಬಿಣಗ, ಗದಗ, ಹೆರ್ಗ,ಗೋಕಾಕ, ಕರ್ಕಿ ಇತ್ಯಾದಿ).

**

ಬಹುಶಃ ಮೂಲದಲ್ಲಿ ಒಂದು ಸಣ್ಣ ನಿಸರ್ಗ ಸುಂದರ ಜನವಸತಿ ಪ್ರದೇಶಕ್ಕೆ ಇದ್ದ ಹೆಸರು - ಕುಡಗ > ಕುಡಗು > ಕೊಡಗು- ಕಾಲಕ್ರಮೇಣ ಒಂದು ಜಿಲ್ಲೆಯ ಹೆಸರಾಗಿ ಉಳಿದಿದೆ.

:)

Comments

Popular posts from this blog

೩. ಜೋಗುಳ- ಒಂದು ಶಬ್ಧ ಮಿಮಾಂಸೆ

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.