Posts

Showing posts from April, 2021

16.ರಾಮಸೇತು

Image
 ಸಮುದ್ರವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ.  ಸಮುದ್ರದ ಮೇಲೆ ಒಂದಷ್ಟು ಕಿಲೋಮೀಟರು ದೂರ ನಡೆದು ಹೋಗಿ ಆಚೆ ದಡ ಸೇರುವ ಕನಸು ಎಂದಾದರೂ ಕಂಡಿದ್ದೀರಾ?  ರಾಮ ಸೇತು ಅಂತಹದೊಂದು ಮಾನವ ನಿರ್ಮಿತ ಸಂಕದಂತೆ ಕಾಣುವ ಒಂದು ವಿಶೇಷವಾದ  ಪ್ರಕೃತಿಯ ಸಹಜ ರಚನೆ.  ತಮಿಳುನಾಡಿನ ರಾಮೇಶ್ವರದ ಮೂಡಣ ಕಡಲ ತೀರದ ಪಂಬನ್ ದ್ವೀಪದಿಂದ ಶ್ರೀಲಂಕಾದ ವಾಯುವ್ಯ ಮೂಲೆಯ ಮನ್ನಾರಿಗೆ  ಜೋಡಿಸುವ ಕಡಲ ಸೇತುವೇ ರಾಮಸೇತು. ರಾಮಸೇತುವಿನ ಇರುವಿಕೆ ಮೂರು- ನಾಲ್ಕು ಸಾವಿರ ವರ್ಷಗಳಿಂದಲೂ ಭಾರತೀಯರಿಗೆ ಪರಿಚಿತ. ರಾಮಸೇತು ರಾಮಾಯಣದಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸದಲ್ಲಿದ್ದಾಗ ನಡೆದ ಸೀತೆಯ ಅಪಹರಣದ ಪ್ರಸಂಗದ ಬಗ್ಗೆ ಕೇಳಿರುತ್ತೀರಿ. ಅಪಹರಣ ಮಾಡಿದ ಸೀತೆಯನ್ನು ರಾವಣ ತನ್ನ  ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದೊಯ್ದನೆಂಬ ಮಾಹಿತಿ ಜಟಾಯು ಪಕ್ಷಿಯಿಂದ ರಾಮ ಲಕ್ಷ್ಮಣರಿಗೆ ದೊರೆಯುತ್ತದೆ. ಲಂಕೆಯಿಂದ ಸೀತೆಯನ್ನು ರಕ್ಷಿಸಿ ಕರೆತರಲು ರಾಮ ಲಕ್ಷ್ಮಣರು ವಾನರರ ಸಹಾಯ ಕೋರುತ್ತಾರೆ.  ವಾನರ ಸೇನೆ ಕಡಲಿಗೆ ಕಲ್ಲು ದಿಮ್ಮಿಗಳನ್ನು ಹಾಕಿ ಜೋಡಿಸಿ ರಾಮೇಶ್ವರದಿಂದ  ಕಡಲ ಮಾರ್ಗದಲ್ಲಿ  ಲಂಕಾದವರೆಗೆ ಒಂದು ಸೇತುವೆ ನಿರ್ಮಿಸಿದರೆಂದು ರಾಮಾಯಣ ಹೇಳುತ್ತದೆ. ಇದು "ರಾಮಸೇತು" ಎಂದು ಪ್ರಸಿದ್ದವಾಗಿದೆ. ರಾಮಾಯಣದ ಘಟನೆಗಳು ನಾಲ್ಕು-ಐದು ಸಹಸ್ರ ವರ್ಷಗಳ ಹಿಂದೆ ನಡೆದಿರಬಹುದೆಂದು ಬಹಳ ಮಂದಿ ನಂಬುತ್ತಾರೆ. ಆದಂ ಸೇ...

15. ದಕ್ಕಣ ಪೀಠಭೂಮಿ ಮತ್ತು ದಕ್ಕಣ ಟ್ರಾಪ್ಸ್( ಲಾವಾಭೂಮಿ)

Image
"ಡೆಕ್ಕನ್" (Deccan ) ಪದ. ಭಾರತದ ದಕ್ಷಿಣ ಭಾಗವನ್ನು "ದಕ್ಕಣ" ವೆಂದು ಕರೆಯುವುದು ನಮ್ಮಲ್ಲಿ ಹಿಂದಿನಿಂದ ಬಂದ ರೂಡಿ. ಇದು ಪ್ರಾಕೃತ ಭಾಷೆಯ ಮೂಲದ ಪದ. "ದಖ್ಖಣ" ಎಂದೂ ಕೂಡಾ ಬರೆಯುವುದುಂಟು. ಇಂಗ್ಲೀಷಿನಲ್ಲಿ "ಡೆಕ್ಕನ್" ಆಗಿದೆ. "ಪ್ರಸ್ಥ ಭೂಮಿ" (plateu) ಎಂದರೆ ಎತ್ತರವಾದ ಭೂಭಾಗ ಅಥವಾ ಪ್ರದೇಶ. "ಪೀಠಭೂಮಿ" ಎನ್ನುವ ಪದ ಕೂಡಾ ಬಳಕೆಯಲ್ಲಿದೆ. ಭೌಗೋಳಿಕವಾಗಿ, ದಕ್ಷಿಣ ಭಾರತದ ಹೆಚ್ಚಿನ ಪ್ರದೇಶವು ಸರಾಸರಿ ಸಮುದ್ರ ಮಟ್ಟಕ್ಕಿಂತ ಬಹಳಷ್ಟು ಎತ್ತರವಾಗಿರುವುದರಿಂದ ಇದಕ್ಕೆ "ದಕ್ಕಣ ಪ್ರಸ್ಥ ಭೂಮಿ" ಅಥವಾ "ದಕ್ಕಣ ಪೀಠಭೂಮಿ" (Deccan plateau) ಎನ್ನುವ ಹೆಸರು ರೂಡಿಯಲ್ಲಿದೆ. ಇದೇ ದಕ್ಕಣ ಪೀಠಭೂಮಿಗೆ ಭಾರತದ ಪರ್ಯಾಯ ದ್ವೀಪ (Peninsular India) ಎನ್ನುವ ಹೆಸರಿದೆ ಪ್ರಾಚೀನ ಕಾಲದಲ್ಲಿ ಜಂಬೂದ್ವೀಪ ಎಂಬ ಹೆಸರು ರೂಡಿಯಲ್ಲಿತ್ತು. ** ದಕ್ಕಣ ಪ್ರಸ್ಥ ಭೂಮಿ ಭೂವಿಜ್ಞಾನಿಗಳು ಈ ದಕ್ಕಣ ಪೀಠಭೂಮಿಯನ್ನು ದಕ್ಕಣದ ಗುರಾಣಿ ಪ್ರದೇಶ (shield area) ಅಥವಾ ಸ್ಥಿರಭೂಮಿ (craton) ಎಂದು ಕರೆಯುವುದುಂಟು. ಕಾರಣ ಇದು ಭೂಖಂಡಗಳ (continental) ಶಿಲಾವಲಯ (lithosphere) ಗಳನ್ನು ಪರಿಗಣಿಸಿದರೆ ಅತಿ ಪುರಾತನ ಹಾಗೂ ಸ್ಥಿರವಾದ ಭೂಭಾಗಗಳನ್ನು ಹೊಂದಿದೆ. ದಕ್ಕಣದ ಹೆಚ್ಚಿನ ಭಾಗ ಅತ್ಯಂತ ಪುರಾತನ ಪ್ರೀಕೇಂಬ್ರಿಯಾ ಶಿಲಾಸ್ತೋಮಗಳಿಂ...

14. ಬಲಿ-ಸುತ್ತು ಪೂಜೆ: ಪರಿಕಲ್ಪನೆಯ ವಿಕಾಸ

Image
  ಕರಾವಳಿಯ ದೇವಸ್ಥಾನಗಳಲ್ಲಿ ಸಮುದಾಯದ ಕೂಡುವಿಕೆ-ನೆರವಿನಿಂದ ಆಚರಿಸುವ ಮನಮೋಹಕ ಸಮಾರಂಭಗಳಲ್ಲಿ ಬಲಿ ಉತ್ಸವದ ಪೂಜೆಗೆ ವಿಶೇಷ ಸ್ಥಾನವಿದೆ. ಬಲಿ ಸುತ್ತು, ಸುತ್ತು ಬಲಿ ಅಥವಾ ಬಲಿ-ಉತ್ಸವ ಎಂದರೆ ಏನು? ** = ಬಲಿ ಪದ- ಅರ್ಥ ವ್ಯಾಪ್ತಿ ಬಲಿ - ಎನ್ನುವ ಪದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಅರ್ಥಗಳಿವೆ. ೧.ಸಾಮಾನ್ಯವಾಗಿ ಎಲ್ಲರೂ ಗ್ರಹಿಸುವ ಅರ್ಥ ನರಬಲಿ, ಪ್ರಾಣಿ ಬಲಿ ಇತ್ಯಾದಿ ಪದಪುಂಜಗಳಲ್ಲಿ ಬರುವ "ಬಲಿ" - ಸಮರ್ಪಿಸುವುದು (sacrifice) ಅಥವಾ ಕೊಡುವುದು (offerring ) ಎಂಬ ಅರ್ಥವನ್ನು ಸೂಚಿಸುತ್ತದೆ. ಇದೆ ಅರ್ಥವನ್ನು ಪ್ರತಿನಿಧಿಸುವ ಬಲಿ ಚಕ್ರವರ್ತಿಯ ಕತೆ ಎಲ್ಲರಿಗೂ ಚಿರಪರಿಚಿತ. ಅಸುರ ವಂಶದ ಬಲಿ ಚಕ್ರವರ್ತಿ ಕೊಡುಗೈವೀರ, ಮಹಾದಾನಿ, ಧರ್ಮಿಷ್ಟ, ಪ್ರಜೆಗಳ ಹಿತ ಬಯಸುವ ಉತ್ತಮ ಅರಸ : ಕೇಳಿದ್ದನ್ನು ಇಲ್ಲ ಅನ್ನುವ ಜಾಯಮಾನ ಇಲ್ಲದವನು. ಐತಿಹ್ಯಗಳ ಪ್ರಕಾರ ವಾಮನ ಎಂಬವನು ಬಲಿ ಚಕ್ರವರ್ತಿಯ ಆಸ್ಥಾನಕ್ಕೆ ಬಂದು ತನಗೆ ಮೂರು ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದಾಗ ಬಲಿ ಅಸ್ತು ಎಂದ. ಬಲಿ ನೋಡುತಿದ್ದಂತೆ ಕುಳ್ಳ ವಾಮನ ಬೆಳೆದು ತ್ರಿವಿಕ್ರಮನಾಗುತ್ತಾನೆ. ಅವನಿಟ್ಟ ಮೊದಲ ಹೆಜ್ಜೆ ಇಡೀ ಭೂಮಂಡಲವನ್ನು ವ್ಯಾಪಿಸುತ್ತದೆ. ಎರಡನೆಯ ಹೆಜ್ಜೆ ಉಳಿದ ಆಕಾಶವನ್ನು ಆವರಿಸುತ್ತದೆ. ತನ್ನ ಮೂರನೆಯ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಚಕ್ರವರ್ತಿಯನ್ನು ಕೇಳುತ್ತಾನೆ. ಬಲಿ ಚಕ್ರವರ್ತಿ ತಲೆಬಾಗಿಸಿ ಕುಳಿತು ತನ್ನ ತ...

13.ಮೂಲದ್ರಾವಿಡ ಭಾಷೆ -ಪ್ರೊಟೊ ದ್ರಾವಿಡಿಯನ್.

Image
  ಮೂ ಲದ್ರಾವಿಡ ಭಾಷೆ ( ಅಥವಾ ಆದಿದ್ರಾವಿಡ / ಪ್ರೊಟೊ ದ್ರಾವಿಡಿಯನ್ - Proto-Dravidian) ಎನ್ನುವುದು ಒಂದು ಪರಿಕಲ್ಪನೆ. ಹಲವಾರು ಸಮಾನ ಲಕ್ಷಣಗಳು ಇರುವಂತಹ ವಿವಿಧ ದ್ರಾವಿಡ ಭಾಷೆಗಳು ಒಂದು ಪ್ರಾಚೀನ ಮೂಲಭಾಷೆಯಿಂದ ಉಗಮವಾಗಿ ಕಾಲಾಂತರದಲ್ಲಿ ವಿಕಾಸವಾಗಿವೆ ಎನ್ನುವ ಸಾಮಾನ್ಯ ಸಿದ್ದಾಂತದ ಆಧಾರದಲ್ಲಿ ಈ ಪರಿಕಲ್ಪನೆ ನಡೆದು ಬಂದಿದೆ. ಮೂಲದ್ರಾವಿಡದವು ಎಂದು ಆಯ್ಕೆ ಮಾಡಿಕೊಂಡಿರುವ ಪದಗಳಲ್ಲಿ ಹೆಚ್ಚಿನವನ್ನು ತಮಿಳು ಭಾಷೆಯಿಂದ ಆಯ್ದುಕೊಂಡಿದ್ದಾರೆ. ಹಾಗಿದ್ದ ಮೇಲೆ ಇವುಗಳು ತಮಿಳಿಗೆ ಹೋಲುವುದು,ಹೊಂದಿಕೆಯಾಗುವುದು ಖಚಿತ ಅಲ್ಲವೇ? ಇಲ್ಲಿ ಒಂದು ವಿಚಾರ:ಮೂಲದ್ರಾವಿಡದ ಪದಗಳು ಎಂದು ಬರೆಯುತ್ತಿರುವ ಪದಗಳನ್ನು ಗಮನಿಸಿದ್ದೀರಾ? ಆ ಪದಗಳ ಆದಿಯಲ್ಲಿ ಒಂದು ನಕ್ಷತ್ರ (*) ಅಥವಾ # ಅಥವಾ ? ಚಿಹ್ನೆಗಳಿರುವುದನ್ನು ಗಮನಿಸಿ. ಇದರ ಅರ್ಥ -ಈ ಪದ ಸಂಭಾವ್ಯ ಮೂಲ ಪದ ಎಂದು! ಆದಿಮಾನವರು ಒಂದು ಕಾಲದಲ್ಲಿ ಮೂಲದ್ರಾವಿಡ ಭಾಷೆ ಮಾತಾನಾಡುತಿದ್ದುದಾದರೆ, ಅದರ ಸ್ಥಿತಿಗತಿಗಳ ಸ್ಪಷ್ಟ ದಾಖಲೆಗಳಿಲ್ಲ. ಆದುದರಿಂದ ಹೇಗೆ ಇದ್ದಿರಬಹುದು ಎಂದು ಊಹಿಸಬೇಕಾಗುತ್ತದೆ. ಈ ಅನಿರ್ದಿಷ್ಟತೆಯನ್ನು ಸೂಚಿಸಲು ಪದದ ಆರಂಭದಲ್ಲಿ ಒಂದು ಚಿಹ್ನೆಯನ್ನು(*/?/# ಇತ್ಯಾದಿ) ಸೇರಿಸುತ್ತಾರೆ. ** ದಕ್ಷಿಣ ಭಾರತದ ಪಂಚದ್ರಾವಿಡ ಭಾಷೆಗಳು (ಕನ್ನಡ, ತಮಿಳು, ತುಳು, ತೆಲುಗು, ಮಲಯಾಳಂ - ಅಕಾರಾದಿಯಾಗಿ) ಅನೇಕ ಸಾಮ್ಯತೆಗಳನ್ನು ಹೊಂದಿವೆ ಎಂದು ಮೊದಲಿಗೆ ಸೂಚಿಸಿದವರು ರ...

12.ತುಳು ಲಿಪಿ ಮತ್ತು ತಿಗಳಾರಿ ಲಿಪಿ

Image
  ತುಳು ಲಿಪಿ - ಅಕ್ಷರಮಾಲೆ ಡಾ|ವೆಂಕಟರಾಜ ಪುಣಿಂಚತ್ತಾಯ ಅವರ ೨೦೧೧ರ ಪ್ರಕಟನೆಯಿಂದ ತುಳು ಲಿಪಿ - ತೌಳವ ಅಕ್ಷರೊಲು- ವಿನ್ಯಾಸ-ನಿರ್ಮಾಣ: ಪ್ರವೀಣ್'ರಾಜ್ ಎಸ್ ಮಂಜೇಶ್ವರ ೨೦೧೪ ತುಳು ಲಿಪಿ - ಬಳಸಿದ ರಾಷ್ಟ್ರಗೀತೆ ಜನಗಣಮನ ಪದ್ಯಸಾಲುಗಳು (ಲಿರಿಕ್) - ಕರಂಬೀರ್ ಸಿಂಗ್ ರೋಹಿಲ್ಲಾ - ಅವರಿಂದ ತುಳುಲಿಪಿ ಬಂದದ್ದು ತಮಿಳು ಮೂಲದ ತಿಗಳಾರಿ ಲಿಪಿಯಿಂದ. ತಿಗಳಾರಿ ಉತ್ತರಕನ್ನಡ ಜಿಲ್ಲೆಯಲ್ಲಿ ಬಳಕೆಯಲ್ಲಿತ್ತು. ದುಂಡನೆಯ ಕನ್ನಡ ಲಿಪಿಯ ಪ್ರಭಾವದಿಂದ ತಿಗಳಾರಿ ಲಿಪಿ ದುಂಡಗಾಗಿ ಕರಾವಳಿಯಲ್ಲಿ ತುಳುಲಿಪಿಯಾಗಿ ಬಳಕೆಗೆ ಬಂದಿದೆ.. ತಿಗಳಾರಿ ಬಹುಶಃ ಈಗ ನೇರವಾಗಿ ಬಳಕೆಯಲ್ಲಿ ಇಲ್ಲ. ತಿಗುಳ ಎಂದರೆ ತಮಿಳ. ಅರಿ ಎನ್ನುವುದು ಆರ್ಯದ ರೂಪಾಂತರ. ಅಂದರೆ ತಮಿಳು ಬ್ರಾಹ್ಮಣರು ಬಳಸುತಿದ್ದ ಲಿಪಿ. ಗ್ರಂಥಲಿಪಿಯಿಂದ ಉದಯಿಸಿದ ಆರ್ಯೆಳುತ್ತು ಲಿಪಿ ಹದಿನಾಲ್ಕನೆಯ ಶತಮಾನದಲ್ಲಿ ವಿಕಾಸಹೊಂದಿತು. ತಮಿಳರ ಆರ್ಯೆಳುತ್ತು ಲಿಪಿ ಮಲಬಾರಿನಲ್ಲಿಯೂ ರೂಡಿಯಲ್ಲಿತ್ತು. ಆರ್ಯೆಳುತ್ತು ಲಿಪಿಯಿಂದ ಮುಂದೆ ತಿಗಳಾರಿ ಲಿಪಿ ರೂಡಿಗೆ ಬಂತು. ತಿಗಳಾರಿ ಯಿಂದ ರೂಪುಗೊಂಡ ತುಳುಲಿಪಿಯಲ್ಲಿ ದೊರೆತ ಪ್ರಥಮ ಕೃತಿ ವಿಷ್ಣುತುಂಗನ ಶ್ರೀ ಭಾಗವತೊದ ಕಾಲ ೧೬೩೦ ಆಗಿರಬಹುದು. ತಿಗಳಾರಿಯಿಂದ ಮಲಯಾಳಂ ಲಿಪಿ ಕೂಡಾ ಬಂದಿದೆ. *

11. ಕೊಡಗು ಪದ ಚಿಂತನೆ

Image
  ಕೊಡಗು - ಈ ಪ್ರಾಚೀನ ಪದ ದ್ರಾವಿಡ ಪೂರ್ವದ ಆದಿವಾಸಿ ಜನಾಂಗಗಳ ಭಾಷೆಯಿಂದ ಬಂದಿರುವಂತಿದೆ. ಸರಳ ಸಣ್ಣ ಸಣ್ಣ ಅಕ್ಷರರೂಪದ ಪದಗಳು ಈ ಪ್ರಾಚೀನ ಭಾಷೆಗಳ ಲಕ್ಷಣವಾಗಿದೆ. ಕೊಡ+ಗು ಕೊಡ: "ಕುಡ" ಎನ್ನುವುದರ ಇನ್ನೊಂದು ರೂಪ. ಕುಡ >ಕೊಡ. (ಕೊಡ - ಎನ್ನುವ ಪದಕ್ಕೆ ಕನ್ನಡ /ದ್ರಾವಿಡ ಭಾಷೆಗಳಲ್ಲಿ ಇತರ ಅರ್ಥಗಳಿವೆ. ಅವುಗಳು ಬಹುಶಃ ಈ ಪ್ರಾಚೀನ ಪದಕ್ಕೆ ಅನ್ವಯಿಸುವುದಿಲ್ಲ. "ಕುಡ" - ಈ ಪದ "ಕುಡಲ" > "ಕೊಡಿಯಾಲ" ದಲ್ಲೂ ಬಂದಿದೆ.) ಕುಡ/ಕೊಡ = ಕು+ಡ. = ಉತ್ತಮ ನೆಲ/ಭೂಮಿ. ಗ/ಗು/ಗಿ/ಕ/ಕಿ = ಜನವಸತಿ (ಗ್ರಾಮ ಇತ್ಯಾದಿ. ಇಲ್ಲಿರುವ ಅವ್ಯಯ "ಗ" - ನಂತರದ ಗಾಂವ್/ಗ್ರಾಮ ಪದದ ಪ್ರಾಚೀನ ಮೂಲ ರೂಪ ಅನಿಸುತ್ತದೆ. ಉದಾಹರಣೆಗಳು: ಬಿಣಗ, ಗದಗ, ಹೆರ್ಗ,ಗೋಕಾಕ, ಕರ್ಕಿ ಇತ್ಯಾದಿ). ** ಬಹುಶಃ ಮೂಲದಲ್ಲಿ ಒಂದು ಸಣ್ಣ ನಿಸರ್ಗ ಸುಂದರ ಜನವಸತಿ ಪ್ರದೇಶಕ್ಕೆ ಇದ್ದ ಹೆಸರು - ಕುಡಗ > ಕುಡಗು > ಕೊಡಗು- ಕಾಲಕ್ರಮೇಣ ಒಂದು ಜಿಲ್ಲೆಯ ಹೆಸರಾಗಿ ಉಳಿದಿದೆ. : )